Current Date 15 May, 2026

Chef ಚಿದಂಬರ ಸಿನಿಮಾದಲ್ಲಿ ಬಿರಿಯಾನಿ ಕುರಿದಾ ಇಲ್ಲ ಮನುಷ್ಯರದಾ? ಕುತೂಹಲ ಹೆಚ್ಚಿಸಿದೆ ಸಿನಿಮಾ ಟ್ರೈಲರ್!

ಸ್ಯಾಂಡಲ್‌ವುಡ್‌ನ ನಾಯಕ ನಟ ಅನಿರುದ್ದ್ ಜತ್ಕರ್ (Aniruddha Jatkar) ಅಭಿನಯದ Chef ಚಿದಂಬರ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಆದರೆ, ಇದನ್ನ ನೋಡಿದ್ರೆ, ಇಲ್ಲಿ ಬೇರೆ ಫೀಲಿಂಗ್ ಬರ್ತಿದೆ. ಇಡೀ ಸಿನಿಮಾದಲ್ಲಿ Chef ಚಿದಂಬರ ಮಾಡೋ ಬಿರಿಯಾನಿಯನ್ನ ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿಂದಿದ್ದಾರೆ. ಆದರೆ, ಅದಕ್ಕೂ ಮೊದಲು ತೋರೋ ದೃಶ್ಯಗಳು ಇಲ್ಲಿ ಬೇರೆ ಅರ್ಥ ಕೊಡುತ್ತವೆ. ಸೈಕೋಪಾತ್‌ ಚಿದಂಬರ (Chidambara) ಮನುಷ್ಯರನ್ನ ಕತ್ತರಿಸಿ ಬಿರಿಯಾನಿ ಮಾಡ್ತಿದ್ದಾನೆ ಅನಿಸುತ್ತದೆ. ಡಾರ್ಕ್ ಕಾಮಿಡಿ (Dark Comedy) ಕಂಟೆಂಟ್ ಇರೋ ಈ ಚಿತ್ರದಲ್ಲಿ ಇನ್ನೂ ಸಾಕಷ್ಟು ವಿಷಯ ಇದೆ. ಇವುಗಳ ಝಲಕ್ ಟ್ರೈಲರ್‌ನಲ್ಲಿಯೇ (Trailer) ಇದೆ. ಇದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ..

ಚಿದಂಬರ್ ಸಿನಿಮಾದಲ್ಲಿ ಮನುಷ್ಯರ ಬಿರಿಯಾನಿ..!

ಹೌದು, ಈ ಒಂದು ಡೌಟ್ ಬರುತ್ತದೆ. ಕಾರಣ, ಅನಿರುದ್ದ್ ಜತ್ಕರ್ ನಿರ್ವಹಿಸಿದ ಚಿದಂಬರ ಪಾತ್ರ ಇಲ್ಲಿ ಸೈಕೋಪಾತ್ ಅನಿಸುತ್ತದೆ. ಇನ್ನೊಮ್ಮೆ ನಾರ್ಮಲ್ ಮನುಷ್ಯ ಅನ್ನುವ ಫೀಲ್ ಕೂಡ ಬರುತ್ತದೆ. ಎರಡು ರೀತಿಯ ಈ ಒಂದು ಪಾತ್ರವನ್ನ ಅನಿರುದ್ದ್ ಸಖತ್ ಆಗಿಯೇ ಮಾಡಿದ್ದಾರೆ. ಅದರ ಝಲಕ್ ಇಡೀ ಟ್ರೈಲರ್‌ನಲ್ಲಿ ನಿಮಗೆ ದೊರೆಯುತ್ತದೆ…